[dropcap]ಹಿ[/dropcap]ರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರೂ, ಭಾರತ ಕಮ್ಯೂನಿಸ್ಟ್ ಪಕ್ಷ (ಸಿ.ಪಿ.ಐ) ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಗಳ ಹಿರಿಯ ನಾಯಕರೂ, ರಾಜ್ಯ ಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಮಾಜಿ ಸದಸ್ಯರೂ, ಕರ್ನಾಟಕ ಭೂಸುಧಾರಣಾ ಮಸೂದೆಯ ರೂವಾರಿಗಳೂ, ಪ್ರಶಸ್ತಿ ವಿಜೇತ ಲೇಖಕರೂ, ಚಿಂತಕರೂ ಆದ ಶ್ರೀ ಬಿ.ವಿ. ಕಕ್ಕಿಲ್ಲಾಯರು ಜೂನ್ 4ರಂದು ಬೆಳಗ್ಗೆ 2 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು. ಕಕ್ಕಿಲ್ಲಾಯರು ಮೇ 23ರಂದು ಬೆಳಗ್ಗೆ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ರೈತ ಕಾರ್ಮಿಕರ ಹಕ್ಕುಗಳೇನೆಂಬುದೇ ತಿಳಿಯದಿದ್ದ 1940ರ ದಶಕದಲ್ಲಿ ದಕ ಜಿಲ್ಲೆಯ ರೈತ ಕಾರ್ಮಿಕರನ್ನು ಸಂಘಟಿಸಿ, ಎಲ್ಲಾ ದಬ್ಬಾಳಿಕೆಗಳನ್ನೂ ಎದುರಿಸಿ, ಅವರ ಮೂಲಭೂತ ಹಕ್ಕುಗಳಿಗಾಗಿ ಅನೇಕ ಹೋರಾಟಗಳನ್ನು ಸಂಘಟಿಸುವ ಮೂಲಕ ದಕ ಜಿಲ್ಲೆಯಲ್ಲೂ, ಕರ್ನಾಟಕದ ಹಲವೆಡೆಗಳಲ್ಲೂ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ಗಳನ್ನು ಪ್ರಬಲವಾಗಿ ಬೆಳೆಸಿದ ಶ್ರೇಯ ಕಕ್ಕಿಲ್ಲಾಯರಿಗೂ, ಅವರ ಸಂಗಾತಿಗಳಿಗೂ ಸೇರುತ್ತದೆ.
ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯೂ ಸೇರಿದಂತೆ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಹೋರಾಟಗಳಲ್ಲಿಯೂ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿದ್ದ ಕಕ್ಕಿಲ್ಲಾಯರು ಅದಕ್ಕಾಗಿ ಸೆರೆವಾಸವನ್ನೂ ಅನುಭವಿಸಿದ್ದರು.
ಸ್ವಾತಂತ್ರ್ಯಾನಂತರದ ದಿನಗಳಲ್ಲೂ ರೈತಕಾರ್ಮಿಕರ ಮೇಲೆ ಮುಂದುವರೆದಿದ್ದ ದಬ್ಬಾಳಿಕೆಗಳನ್ನೂ, ತೀವ್ರ ಶೋಷಣೆಯನ್ನೂ ಎದುರಿಸಿ ಅವರನ್ನು ಸಂಘಟಿತ ಹೋರಾಟಗಳಿಗೆ ಅಣಿನೆರೆಸುವ ಕಾರ್ಯವನ್ನು ಕಕ್ಕಿಲ್ಲಾಯರೂ, ಅವರ ಸಂಗಾತಿಗಳೂ ಮುಂದುವರೆಸಿದ್ದರು.
ಮೊತ್ತ ಮೊದಲ ರಾಜ್ಯಸಭೆಗೆ 1952-1954ರವರೆಗೆ ಮದ್ರಾಸ್ ಅಸೆಂಬ್ಲಿಯಿಂದ ಆಯ್ಕೆಗೊಂಡಿದ್ದ ಕಕ್ಕಿಲ್ಲಾಯರು ಅಲ್ಲೂ ತಮ್ಮ ಛಾಪನ್ನು ಮೂಡಿಸಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಕಕ್ಕಿಲ್ಲಾಯರು ಮಹತ್ವದ ಪಾತ್ರವನ್ನು ವಹಿಸಿದ್ದರು.
ಬಂಟ್ವಾಳ ಹಾಗೂ ವಿಟ್ಲ ಕ್ಷೇತ್ರಗಳಿಂದ 1972 ಹಾಗೂ 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಭಾರೀ ಮತಗಳಿಂದ ಆಯ್ಕೆಯಾಗಿದ್ದ ಕಕ್ಕಿಲ್ಲಾಯರು ಅತ್ಯಂತ ಸಮರ್ಥ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಭೂಸುಧಾರಣಾ ಮಸೂದೆಯ ರಚನೆಯಲ್ಲಿ ಅವರು ವಹಿಸಿದ್ದ ಪಾತ್ರವು ಮಹತ್ತರವಾದುದು.
ತಮ್ಮ ತೀಕ್ಷ್ಣ ಬುದ್ದಿಮತ್ತೆ, ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುವ ಭಾಷಣ ಶೈಲಿ, ಅಗಾಧವಾದ ಓದು ಮತ್ತು ಪಾಂಡಿತ್ಯ, ಸರಳತೆ, ಸಚ್ಛಾರಿತ್ರ್ಯ ಹಾಗೂ ಸಜ್ಜನಿಕೆಗಳಿಗೆ ಹೆಸರಾಗಿದ್ದ ಕಕ್ಕಿಲ್ಲಾಯರು, ಜಾತ್ಯಾತೀತವಾದ, ಕೋಮು ನಿರಪೇಕ್ಷವಾದ, ಸರ್ವರಿಗೂ ಸಮಬಾಳನ್ನು ನೀಡಬಲ್ಲ ಪ್ರಗತಿಪರ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು, ಕೊನೆ ತನಕ ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು.
ಜೂನ್ 9 ರ ಉದಯವಾಣಿಯಲ್ಲಿ ನಾರಾಯಣ ಎ ಬರೆದ ಅಂಕಣ ಕಾಲಕಾರಣ: ಬರೆಯದ ದಿನಚರಿಯ ಕೊನೆಯ ಪುಟ ಮುಗಿಸಿದ ಬಿ.ವಿ. ಕಕ್ಕಿಲ್ಲಾಯ: ಎಲ್ಲ ತತ್ವದೆಲ್ಲೆ ಮೀರಿದ ರಾಜಕಾರಣಿ
ಪತ್ರಿಕಾ ವರದಿಗಳು:
- ಪ್ರಜಾವಾಣಿ, ಜೂನ್ 5, 2012: ಸಿಪಿಐ ನಾಯಕ ಕಕ್ಕಿಲ್ಲಾಯ ನಿಧನ | ಹಿರಿಯ ಸಿಪಿಐ ನಾಯಕ ಬಿ.ವಿ.ಕಕ್ಕಿಲ್ಲಾಯ ನಿಧನ | ನಿಜವಾದ ಅರ್ಥದ ಕಮ್ಯುನಿಸ್ಟ್ ನಾಯಕ:ಬಡವರ ಊಟವೇ ಅವರ ಊಟ… ಕೆ.ಆರ್.ಶ್ರೀಯಾನ್
- ಸಂಯುಕ್ತ ಕರ್ನಾಟಕ, ಜೂನ್ 5, 2012: ನಿರ್ಗಮಿಸಿದ ಬಿ.ವಿ. ಕಕ್ಕಿಲ್ಲಾಯ
- ವಾರ್ತಾಭಾರತಿ, ಜೂನ್ 5, 2012: ಹಿರಿಯ ಸ್ವಾತಂತ್ರ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ನಿಧನ [ನೋಡಿ | ನೋಡಿ | ನೋಡಿ] ಕಾಮ್ರೆಡ್ಗೆ ಲಾಲ್ ಸಲಾಂ [ನೋಡಿ | ನೋಡಿ] ಬಸವಳಿಯದ ಹೋರಾಟಗಾರ ಬಿ ವಿ ಕಕ್ಕಿಲ್ಲಾಯ [ನೋಡಿ] ಅಗಲಿದ ಚೇತನ ಬಿ.ವಿ.ಕಕ್ಕಿಲ್ಲಾಯರಿಗೆ ಸ್ಫೂರ್ತಿಯ ನಮನ | ಕಕ್ಕಿಲ್ಲಾಯರ ಸಾಧನೆಗಳ ದಾಖಲೀಕರಣ: ಹೆಣ್ಮಕ್ಕಳ ಶಿಕ್ಷಣಕ್ಕೆ ನೆರವು: ಜೂನ್ -06-2012
- ವಿಜಯ ಕರ್ನಾಟಕ, ಜೂನ್ 5, 2012: ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಇನ್ನಿಲ್ಲ [ನೋಡಿ | ನೋಡಿ]
- ವಿಜಯವಾಣಿ, ಜೂನ್ 5, 2012: ಕಾಮ್ರೆಡ್ ಕಕ್ಕಿಲ್ಲಾಯರ ಹೋರಾಟದ ಹೆಜ್ಜೆಗಳು | ಚಳುವಳಿಗೆ ಭೂಮಿ ಕೊಟ್ಟ ಹೋರಾಟಗಾರ [ನೋಡಿ]
- ಉದಯವಾಣಿ, ಜೂನ್ 5: ಬಿ ವಿ ಕಕ್ಕಿಲ್ಲಾಯ ಇನ್ನಿಲ್ಲ | ಜೂನ್ 6: ಬಿ.ವಿ. ಕಕ್ಕಿಲ್ಲಾಯ ವೈಚಾರಿಕ ಲೋಕದ ವೈಜ್ಞಾನಿಕ ಚಿಂತಕ – ಡಾ| ಸಿದ್ಧನಗೌಡ ಪಾಟೀಲ
- The Hindu, June 5, 2012: B.V. Kakkilaya passes away | Leaders pay last respects to Kakkilaya | Freedom fighter Kakkilaya dead | June 6: Left leaders hope for unified movement
- Deccan Herald, June 5, 2012: Mangalore bids adieu to Kakkilaya | Kakkilaya fought for beedi, cashew factory workers | ‘Kakkilaya was a model’
- Times of India, June 5, 2012: Veteran freedom fighter Kakkilaya dies at 93 | Rationalists condole Kakkilaya’s death
- Daijiworld, June 4, 2012: Veteran Freedom Fighter, Communist Leader B V Kakkilaya No More | Communist Leader B V Kakkilaya Given Tearful Farewell
- Mangalore Today, June 4, 2012: Freedom fighter B V Kakkilaya is no more | Final rites of freedom fighter BVK held
- Kemmannu.com
- Mangalore Mirror, June 4, 2012: Veteran freedom fighter B V Kakkilaya passed away
- Mangalorean.com, June 4, 2012: Freedom-fighter, Former MLA B V Kakkillaya (93) Passes away
- മാതൃഭുമി: കമ്മ്യൂണിസ്റ്റ് നേതാവ് ബി.വി. കക്കില്ലായ അന്തരിച്ചു | ബി.വി.കക്കില്ലായ കമ്യൂണിസ്റ്റ് കര്ഷക പ്രസ്ഥാനം കെട്ടിപ്പടുത്ത നേതാവ്
- മാധ്യമം
- മംഗളം: സി.പി.ഐ. നേതാവ് ബി.വി. കക്കില്ലായ അന്തരിച്ചു
- കെ വാര്ത്ത: കമ്മ്യൂണിസ്റ്റ് നേതാവ് ബി.വി കക്കില്ലായ അന്തരിച്ചു
- മലയാള മനോരമ: ബി.വി. കക്കില്ലായ നിര്യാതനായി
- മലയാള മനോരമ: